ನಾನು ಸಾಯಬೇಕೆಂದರೆ

Translated to Kannada by

ನಾನು ಸಾಯಬೇಕೆಂದರೆ

ನೀವು ಉಳಿಯಬೇಕು

ನನ್ನ ಕಥೆಯನ್ನು ಹೇಳಿ

ನನ್ನ ಆಸ್ತಿಯನ್ನು ಮಾರಿ

ಒಂದು ಬಟ್ಟೆ

ಹಾಗು ದಾರವನ್ನು ಖರೀದಿಸಿ

(ಬಿಳಿ ಬಟ್ಟೆ, ಉದ್ದ ಬಾಲ)।

ಗಾಜ಼ಾದಲ್ಲಿ ಎಲ್ಲೋ ಒಂದು ಮಗು

ಸ್ವರ್ಗದ ಕಡೆ ನೋಡುತ—

ಅವರ ದೇಹಕ್ಕೆ,

ಸ್ವಂತ ಮಗನಿಗೆ,

ಯಾರಿಗು ವಿದಾಯ ಹೇಳದೆ—

ಜ್ವಾಲೆಯಲ್ಲಿ ಬಿಟ್ಟ ತಂದೆಯನ್ನು ಕಾಯುತಿರುವ ಆ ಮಗು

ಈ ಗಾಳಿಪಟ, ನನ್ನ ಗಾಳಿಪಟವನ್ನು ಹಾರುತ ನೋಡಿ

ಒಂದು ಕ್ಷಣ ದೇವದೂತರ ದರ್ಶನೆ ಮಾಡಿ

ಇನ್ನೊಮ್ಮೆ ಪ್ರೀತಿಗೆ ಜೀವ ಕೊಡಲಿ।

ನಾನು ಸಾಯಬೇಕೆಂದರೆ

ಅದು ವಿಶ್ವಾಸ ತರಲಿ

ಒಂದು ಕಥೆಯಾಗಲಿ॥


A poem by Refaat Alareer.